ಉತ್ತರ ಖಗೋಳಾಕಾಶದ ನಕ್ಷತ್ರಪುಂಜಗಳ ಪೈಕಿ ಒಂದು. ಪೂರ್ವದಲ್ಲಿನ ಆಂಡ್ರೊಮಿಡ ಮತ್ತು ಪಶ್ಚಿಮದಲ್ಲಿನ ಸಿಗ್ನಸ್ ಪುಂಜಗಳ ನಡುವೆ ಇದೆ. ಸನ್ನಿಹಿತ ಸ್ಥಾನ : ವಿಷುವದಂಶ 22ಗಂ.; ಘಂಟಾವೃತ್ತಾಂಶ 45⁰ ಉತ್ತರ ಕಾಂತಿಮಾನ 3.85 ಇರುವ ತಾರೆ ಇದರ ಪ್ರಮುಖ ನಕ್ಷತ್ರ. ಸೂರ್ಯನಿಂದ 90 ಬೆಳಕು ವರ್ಷಗಳ ದೂರದಲ್ಲಿದೆ. ಐದನೆಯ ಕಾಂತಿಮಾನಕ್ಕೆ ಮೇಲ್ಪಟ್ಟ ಎರಡು ತಾರೆಗಳು ಇವೆ. ಇವುಗಳಲ್ಲಿ 10 ಲಸೆರ್ಟೆ ಎಂಬುದು ಸೂರ್ಯನಿಂದ 2000 ಬೆಳಕು ವರ್ಷಗಳಿಗೂ ಹೆಚ್ಚು ದೂರದಲ್ಲಿದೆ. ಲಸೆರ್ಟ ಎಂದರೆ ಹಲ್ಲಿ ಎಂದು ಅರ್ಥ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ